ಭಾರತ ಸರ್ಕಾರ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿ ಎಂದರೆ ಅದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. ವಾರ್ಷಿಕ ಪ್ರಶಸ್ತಿಗಳ ಜೊತೆಯಲ್ಲಿಯೇ ಭಾರತದ ವಿಭಿನ್ನ ಭಾಷೆಗಳ ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಿ ಅವರಿಗೆ ಸಾಹಿತ್ಯ ಅಕಾಡೆಮಿ ಫೆಲೋ ಗೌರವ ನೀಡುತ್ತದೆ. ಇದರ ಜತೆಯಲ್ಲಿ ಯುವ ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ, ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಬಾಲ ಸಾಹಿತ್ಯ ಪುರಸ್ಕಾರ, ಅನುವಾದ ಕ್ಷೇತ್ರದ ಸಾಧನೆಗೆ ಅನುವಾದ ಬಹುಮಾನಗಳನ್ನೂ ನೀಡಿ ಗೌರವಿಸಲಾಗುತ್ತದೆ. ಈ ಪ್ರಶಸ್ತಿಗಳಿಗೆ ಭಾಜನರಾದ ಕನ್ನಡ ಸಾಹಿತ್ಯ ಲೋಕದ ದಿಗ್ಗಜರ ಪಟ್ಟಿ ಈ ಕೆಳಗಿನಂತಿದೆ. == ಸಾಹಿತ್ಯ ಅಕಾಡೆಮಿ ಫೆಲೋ ಗೌರವ == ಸಾಹಿತ್ಯ ಅಕಾಡೆಮಿ ನೀಡುವ ಅತ್ಯುನ್ನತ ಸಾಹಿತ್ಯ ಗೌರವವಿದು. ಭಾರತೀಯ ಭಾಷೆಗಳಲ್ಲಿ ಅಪೂರ್ವ ಸಾಧನೆ ಮಾಡಿದ ಹಿರಿಯ ಸಾಧಕರಿಗೆ ಫೆಲೋ ಗೌರವ ಸಲ್ಲಿಸಲಾಗುತ್ತದೆ. ಹೀಗೆ ಮೊದಲ ಫೆಲೋ ಗೌರವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಹಾಗೂ ಭಾರತದ ರಾಷ್ಟ್ರಪತಿಗಳಾಗಿ ದೇಶಕ್ಕೆ ಕೊಡುಗೆ ನೀಡಿದ ಸರ್ವೇಪಲ್ಲಿ ರಾಧಾಕೃಷ್ಣನ್ ಅವರಿಗೆ 1968ರಲ್ಲಿ ಸಂದಿತು. ಇದರ ಜತೆಯಲ್ಲಿ ವಿದೇಶೀ ಲೇಖಕರಿಗೆ ಗೌರವ ಫೆಲೋಶಿಪ್, ಏಷ್ಯಾದ ಕಲೆ, ಸಾಹಿತ್ಯ, ಸಂಸ್ಕೃತಿಯ ಅಧ್ಯಯನ ಮಾಡುವವರಿಗೆ ನೀಡಲಾಗುತ್ತಿದ್ದ ಆನಂದ ಕುಮಾರಸ್ವಾಮಿ ಫೆಲೋಶಿಪ್ (ಈಗ ನಿಲ್ಲಿಸಲಾಗಿದೆ), ಸಾರ್ಕ್ ದೇಶಗಳ ಸಾಹಿತಿಗಳಿಗೆ ಸಲ್ಲುವ ಪ್ರೇಮ್‌ಚಂದ್ ಫೆಲೋಶಿಪ್ಗಳನ್ನೂ ಸಾಹಿತ್ಯ ಅಕಾಡೆಮಿ ನೀಡುತ್ತಿದೆ. == ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ == 1954ರಲ್ಲಿ ಸ್ಥಾಪನೆಯಾದ ಈ ಪ್ರಶಸ್ತಿಯನ್ನು ಪ್ರತಿವರ್ಷವೂ ಸಾಹಿತ್ಯ ಅಕಾಡೆಮಿ ಅಂಗೀಕರಿಸಿದ 24 ಭಾಷೆಗಳ ಒಂದೊಂದು ಪುಸ್ತಕಕ್ಕೆ ನೀಡಿ ಗೌರವಿಸಲಾಗುತ್ತದೆ. ಆರಂಭದಲ್ಲಿ ₹5000/- ಇದ್ದ ಹಣದ ಮೊತ್ತ, 1983ರಲ್ಲಿ ₹10,000/-ಕ್ಕೆ ಏರಿಕೆಯಾಯಿತು. ಆ ಬಳಿಕ, 1988ರಿಂದ ₹25,000/-, 2001ರಿಂದ ₹40,000/-, 2003ರಿಂದ ₹50,000/-ಕ್ಕೆ ಹೆಚ್ಚಳವಾಗಿದೆ. ಪ್ರಸ್ತುತ ಬಹುಮಾನದ ಮೊತ್ತ ₹1,00,000/-. ಪ್ರಶಸ್ತಿಯ ಮೊತ್ತದ ಜೊತೆಯಲ್ಲಿ ಒಂದು ತಾಮ್ರಪತ್ರ, ಪ್ರಶಸ್ತಿ ಫಲಕ ಮತ್ತು ಶಾಲನ್ನು ನೀಡಿ ಗೌರವಿಸಲಾಗುತ್ತದೆ. == ಭಾಷಾ ಸಮ್ಮಾನ್ ಗೌರವ ಕನ್ನಡ ಸಾಹಿತ್ಯ2020 == == ಅನುವಾದ ಪುರಸ್ಕಾರ == == ಯುವ ಪುರಸ್ಕಾರ == == ಉಲ್ಲೇಖಗಳು ==